ಕಾಸರಗೋಡು: ಚಿನ್ನದ ಆಭರಣವೆಂದು ನಂಬಿಸಿ ನಕಲಿ ಚಿನ್ನಾಭರಣ ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದ ಅಂತಾರಾಜ್ಯ ತಂಡವನ್ನು ಕಾಸರಗೋಡಿನಿಂದ ಬಂಧಿಸಲಾಗಿದೆ. ಕರ್ಣಾಟಕ ಮಂಡ್ಯ ಜಿಲ್ಲೆಯ ಈ ಆರೋಪಿಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿ ವಿಜಯ ಭಾರತ್ ರೆಡ್ಡಿ, ಎ.ಎಸ್.ಪಿ.ಅಚ್ಚುತ ಅಶೋಕ್, ಸ್ಪೆಶಲ್ ಸ್ಕಾಡ್, ಕಾಸರಗೋಡು ಟೌನ್ ಪೊಲೀಸ್ ಎಂಬಿವರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಯಿತು.
ಅರ್ಜುನ ಸೋಲಂಕಿ(30), ಗಣೇಶ್ ಸೋಲಂಕಿ(53), ಜೀವನ್ ಲಾಲ್(62), ಹರಿಲಾಲ್ (37) ಬಂಧಿತ ಆರೋಪಿಗಳು. ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯ ವೇಳೆ ಲಭಿಸಿದ ಸುಳಿವಿನಂತೆ ಇವರನ್ನು ಬಂಧಿಸಲಾಗಿದೆ.
ಕಾಸರಗೋಡು ಪ್ರೆಸ್ ಕ್ಲಬ್ ಜಂಕ್ಷನ್ ಬಳಿಯಿಂದ ಇವರ ಬಂಧನ ನಡೆದಿದೆ. ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಇಬ್ಬರು ಆರೋಪಿಗಳು ಓಡಿ ಪರಾರಿಯಾಗಲು ಯತ್ನಿಸಿದ್ದು ಬೆನ್ನಟ್ಟಿ ಹಿಡಿಯಲಾಯಿತು.
ಚಿನ್ನಾಭರಣ ಅಗತ್ಯ ಇರುವವರನ್ನು ಬೇಟಿಯಾಗಿ ಮೊದಲು ಸಣ್ಣ ಪ್ರಮಾಣದ ಅಸಲಿ ಚಿನ್ನ ನೀಡಲಾಗುತ್ತದೆ. ವ್ಯಾಪಾರ ಕುದುರಿದ ನಂತರ ನಕಲಿ ಚಿನ್ನ ನೀಡಲಾಗುತ್ತದೆ.
ಒಂದೇ ನೋಟಕ್ಕೆ ಅಸಲಿ ಚಿನ್ನವೆಂದು ತೋರುವ ರೀತಿಯ ನಕಲಿ ಆವರಣವನ್ನು ಇವರು ನೀಡುತ್ತಿದ್ದರು.
ಬಂಧಿತರ ಕೈಯಿಂದ ಆರುವರೆ ಕಿಲೊ ನಕಲಿ ವಜ್ರ, ನಕಲಿ ಆಭರಣ, 7 ಗ್ರಾಂ ಅಸಲಿ ಚಿನ್ನ ಎಂಬಿವುಗಳನ್ನು ವಶಪಡಿಸಲಾಗಿದೆ.
Tags
ಕಾಸರಗೋಡು

